“Book Descriptions: ನನ್ನ ಎರಡು ಕತಾ ಸಂಕಲನಗಳನ್ನು ಓದಿದ ಹಿರಿಯರು, ಗೆಳೆಯರು ಮತ್ತು ಅಜ್ಞಾತ ಓದುಗರನೇಕರು ನಿಮ್ಮ ಮುಂದಿನ ಕತೆಗಳನ್ನ ಓದುವುದು ಯಾವಾಗ ? ನೀವೊಂದು ಕಾದಂಬರಿ ಯಾಕೆ ಬರೆಯಬಾರದು ಎಂದು ಕೇಳಿ ಮಾಡುತ್ತಿದ್ದ ಪ್ರೀತಿಪೂರ್ವಕ ಒತ್ತಾಯವೇ ಈ ಪುಸ್ತಕ ಹೊರಬರುತ್ತಿರುವುದಕ್ಕೆ ಕಾರಣ. ಬರೆಯುವುದಕ್ಕೆ ಇನ್ನು ಏನೂ ಇಲ್ಲ ಅಂತ ಓಡಾಡುತ್ತ ಕಾಲ ಕಳೆಯುತ್ತಿದ್ದ ದಿನಗಳಲ್ಲಿ ನನ್ನನ್ನು ಹುಡುಕಿಕೊಂಡು ಬಂದ ಕತೆಯೊಂದು ಇಲ್ಲಿದೆ. ಈ ಕಾದಂಬರಿ ನನ್ನ ಜೀವನದ ಭಾಗವಾದ ನನ್ನ ಕತಾಜಗತ್ತು, ನನ್ನ ಗೆಳೆಯರು, ನಾನು ಓಡಾಡುವ ಪರಿಸರ ಇವೆಲ್ಲದರ ಹಿನ್ನಲೆಯಲ್ಲಿ ಹುಟ್ಟಿಕೊಂಡ ಒಂದು ಕಾಲ್ಪನಿಕ ಕತೆ. -ಸಚಿನ್ ತೀರ್ಥಹಳ್ಳಿ” DRIVE