“Book Descriptions: ಜೀವಸೆಲೆ ಇರುವುದೇ ಮಲೆನಾಡಿನಲ್ಲಿ! ಗುಡ್ಡ - ಬೆಟ್ಟ, ನದಿಗಳ ಅದ್ಭುತ, ಹಸಿರಿನ ನಾಡಿದು. ಇಲ್ಲಿನ ಮನಮೋಹಕ ದೃಶ್ಯಗಳಿಗೆ ಮನಸೋಲದವರೇ ಇಲ್ಲ. ಸೃಷ್ಟಿಕರ್ತ ತನ್ನ ಸೃಷ್ಟಿಸುವ ಜಾಣ್ಮೆಯನ್ನೆಲ್ಲಾ ಇಲ್ಲೇ ತೋರಿಸಿ 'ಬೇಕನ್ನುವವರು ಇಲ್ಲೇ ಬಂದು ನೋಡಿಕೊಳ್ಳಿ' ಎನ್ನುವಂತೆ ಮಾಡಿದ್ದಾನೆ . ಆಕಾಶದಲ್ಲಿ ದಟ್ಟ ಮೋಡ ಕೂಡಿಕೊಂಡು ವಾತಾವರಣ ತಂಪಾಗಿ, ಕಾಗೆಗಳು ಕಾ, ಕಾ, ಎನ್ನುತ್ತಿರುವಾಗಲೇ ಹನಿ ಹನಿಯಾಗಿ ಪಶ್ಚಿಮದ ಕಡೆಯಿಂದ ಬೀಸಿ ಬರುವ ತಂಗಾಳಿಯೊಂದಿಗೆ ಶುರುವಾಗುವ ಇಲ್ಲಿನ ಮುಂಗಾರು ಮಳೆಯ ಸೊಗಸೇ ಬೇರೆ . ಅದರ ನನಪು ಎಲ್ಲಿ ಹೋದರೂ ಮಾಸುವುದಿಲ್ಲ .
ಇಲ್ಲಿ ಮಲೆನಾಡು ಎಂದರೆ ನಾನು ಹುಟ್ಟಿ ಬೆಳೆದ ಕಾಫಿನಾಡು . ಕಾಫಿತೋಟ ಎಂದರೇನು ? ಹೇಗಿರುತ್ತದೆ ? ಅದರ ಏಳು - ಬೀಳುಗಳೇನು ? ಇಲ್ಲಿನ ಬದುಕು , ಮಳೆಗಾಲದ ಪ್ರಕೃತಿ ಹೇಗಿರುತ್ತದೆ ? ಜನ ಎಂಥವರು ? ಅದಲ್ಲದರ ವೈವಿಧ್ಯಮಯವಾದ ಪ್ರಕೃತಿ ಮತ್ತು ಕಾಫಿತೋಟದ ನೈಜ ಚಿತ್ರಣ ಇದರಲ್ಲಿದೆ . ಜೊತೆಗೆ ಒಬ್ಬಳು ವಿದ್ಯಾವಂತ , ವಿಚಾರವಂತ ಮಲೆನಾಡಿನ ಯುವ ಕ್ಲಿಷ್ಟ ಸನ್ನಿವೇಶಗಳಲ್ಲಿ ತೆಗೆದುಕೊಳ್ಳುವ ಸಲ ನಿರ್ಧಾರಗಳ ರೋಚಕ ಕತೆಯೂ ಇದರಲ್ಲಿದೆ .