“Book Descriptions: ಯೋಗಿಯ ಶುದ್ಧಶೀಲ, ನಿರ್ಲಿಪ್ತತೆಗಲನ್ನೂ, ಕಮ್ಯೂನಿಸ್ಟ್ 'ಕಾಮಿಸಾರ್' ಒಬ್ಬನ ನಿಷ್ಠುರ ಕಾರ್ಯದಕ್ಷತೆಯನ್ನೂ, ಕೀಟಲೆ ಹುಡುಗನ ವಿನೋದ ಪ್ರಜ್ಞೆಯನ್ನೂ, ಹದವಾಗಿ ಬೆರೆಸಿದ ಪಾಕದಿಂದ ಹುಟ್ಟಿದ ಕೆ.ಎಂ. ಚಿಣ್ಣಪ್ಪ, ನಮ್ಮ ಸುತ್ತಲ ಕಾಡುಗಳಲ್ಲಿ ಓಡಾಡಿದ ಒಂದು ಎತ್ತರದ ಜೀವ. ನಾಗರಹೊಳೆಯಲ್ಲಿ ಅವರ ಕಾಲು ಶತಮಾನದ ಕಾರುಬಾರು ಭಾರತದ ಮನ್ಯಜೀವಿ ಸಂರಕ್ಷಣೆಯ ಇತಿಹಾಸ ಪರ್ವಕಾಲದ ಒಂದು ಅಪರೂಪದ ದಾಖಲೆ. ಈ ಘಟನಾವಳಿಗಳನ್ನೂ ಚಿಣ್ಣಪ್ಪನವರ ಉನ್ನತ ವ್ಯಕ್ತಿತ್ವವನ್ನೂ ನಿರೂಪಕ ಟಿ.ಎಸ್. ಗೋಪಾಲ್ ಅತ್ಯಂತ ಸಮರ್ಥವಾಗಿ ಈ ಪುಸ್ತಕದ ರೂಪದಲ್ಲಿ ಕನ್ನಡಿಗರ ಮುಂದೆ ಇಟ್ಟಿದ್ದರೆ. 'ಕಾಡಿನೊಳಗೊಂದು ಜೀವ' ವನ್ಯಜೀವಿ ಸಂರಕ್ಷಣೆಯಲ್ಲಿ ಆಸಕ್ತ ಕಾರಯಶೇಲರಿಗೆಲ್ಲಾ ಮುಂದಿನ ದಾರಿ ತೋರುವ ದೀವಟಿಗೆಯಾಗಿ ಬೆಳಗುವುದೆಂದು ನನ್ನ ನಂಬಿಕೆ. - ಡಾ॥ ಕೆ. ಉಲ್ಲಾಸ ಕಾರಂತ” DRIVE