“Book Descriptions: ಬುದ್ಧನು ಪರಿನಿರ್ವಾಣ ಹೊಂದಿದಾಗ ಅವನ ಅಸ್ಥಿಯಿಂದ ನಾಲ್ಕು ಹಲ್ಲುಗಳನ್ನು ಸಂಗ್ರಹಿಸಲಾಯ್ತು. ಅದು ಇಂದಿಗೂ ಭದ್ರವಾಗಿದೆ ಎಂದು ನಂಬಲಾಗಿದೆ. ಕಾಳಸಂತೆಯಲ್ಲಿ ಈ ದಂತದ ಬೆಲೆ ಲೆಕ್ಕಮಾಡಲಸಾಧ್ಯ. ಅಲ್ಲದೇ ಬೌದ್ಧಗುರು ಅಶ್ವಘೋಷನ ದಂತಗಳೂ ಇವೆಯಂತೆ. ಅವುಗಳಲ್ಲಿ ಆತನೇ ಅಲೆಗ್ಸಾಂಡರ್ ಬಚ್ಚಿಟ್ಟು ಹೋದ ನಿಧಿಯಿರುವ ಸ್ಥಳದ ನಕ್ಷೆ ಕೊರೆದಿದ್ದಾನಂತೆ. ತನ್ನನ್ನು ತಾನೇ ಅಗ್ನಿಗರ್ಪಿಸಿಕೊಂಡು ಅಶ್ವಘೋಷ ಸಾಧಿಸಿದ್ದೇನು? ಆ ನಿಧಿ ಈಗ ಎಲ್ಲಿದೆ? ಈಗ ಅದರ ಹುಡುಕಾಟದಲ್ಲಿರುವವರು ಯಾರು? ಅಶ್ವಘೋಷನ ಆಸೆಯಂತೆ ನಿಧಿ ಸತ್ಪಾತ್ರರಿಗೆ ಸಂದಿತೇ!?
ಐತಿಹಾಸಿಕ ರೋಚಕ ಘಟನೆಗಳ ಸುತ್ತ ಹೆಣೆಯಲಾದ ಅದ್ಭುತ ಥ್ರಿಲ್ಲರ್ ಕಾದಂಬರಿ ಡಾ.ಕೆ.ಎನ್.ಗಣೇಶಯ್ಯನವರ "ಚಿತಾದಂತ - ಶಾಂತಿದೂತನ ದಂತಯಾನ"” DRIVE