ಕೇಸ್ ಆಫ್ ಕಮಲಾಪುರ ಎಸ್ಟೇಟ್ | Case of Kamalapur Estate

(By Kowshik Koodurasthe)

Book Cover Watermark PDF Icon
Download PDF Read Ebook

Note: If you encounter any issues while opening the Download PDF button, please utilize the online read button to access the complete book page.

×


Size 27 MB (27,086 KB)
Format PDF
Downloaded 668 times
Status Available
Last checked 14 Hour ago!
Author Kowshik Koodurasthe

“Book Descriptions: ತನ್ನೆದುರಿಗಿದ್ದ ತಿಮಿಂಗಿಲ ವಾಂತಿಯ ಚಿಕ್ಕ ತುಂಡೊಂದನ್ನು ಕೈಗೆತ್ತಿಕೊಂಡ ಡಿಟೆಕ್ಟಿವ್ ಹಿಮವಂತನು ಅದರೆಡೆಗೆ ತೀಕ್ಷ್ಣ ದೃಷ್ಟಿ ಬೀರುತ್ತಾ "ನನಗೇನೋ ಈ ಕೇಸಿನಲ್ಲಿ ಥ್ರಿಲ್ ಇದೆಯೆಂದು ಅನಿಸುತ್ತಿದೆ. ನಾನು ಈ ಕೇಸನ್ನು ತೆಗೆದುಕೊಳ್ಳುತ್ತೇನೆ, ಆದರೆ ಇನ್ವೆಸ್ಟಿಗೇಶನ್ ಗೆಂದು ಆ ಎಸ್ಟೇಟಿನೊಳಗೆ ಹೋಗುವುದಾದರು ಹೇಗೆ? ಎಂದು ಪ್ರಶ್ನಿಸುತ್ತಿದ್ದಂತೆ, ಅದರ ಕುರಿತು ನೀವು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ನನಗೆ ಬಹಳ ಬೇಕಾದ ಸ್ನೇಹಿತರೊಬ್ಬರು ರಿಸರ್ಚ್ ವಿಚಾರವಾಗಿ ಬಿಸ್ಲೆ ಘಾಟಿಗೆ ಬರುತ್ತಿರುವುದರಿಂದ, ಅವರಿಗೆ ಉಳಿದುಕೊಳ್ಳಲು ಒಂದು ತಿಂಗಳ ಮಟ್ಟಿಗೆ ನಿಮ್ಮ ಗೆಸ್ಟ್ ಹೌಸಿನ ಅಗತ್ಯವಿದೆಯೆಂದು ಎಸ್ಟೇಟಿನ ಓನ‌ರ್ ಕಾಳಿದಾಸ್ ಅರಸರಲ್ಲಿ ನಾನು ಕೇಳಿಕೊಳ್ಳುತ್ತೇನೆ. ಅದಕ್ಕವರು ಬೇಡವೆನ್ನುವುದಿಲ್ಲ. ಕಾಳಿದಾಸ್ ಅರಸರ ಫ್ಯಾಮಿಲಿಯ ಸದಸ್ಯರು ಕೂಡ ಕೆಲದಿನಗಳ ಮಟ್ಟಿಗೆ, ಅಲ್ಲಿರುತ್ತಾರೆ. ಅವರಲ್ಲಿಲೇ ಯಾರೋ ಕೋಟ್ಯಂತರ ರೂಪಾಯಿ ಮೌಲ್ಯದ ನನ್ನ ಮಾಲನ್ನು ಅಪಹರಿಸಿದ್ದಾರೆ. ಆದ್ದರಿಂದ ನೀವು ಆರಾಮಾಗಿ ನಿಮ್ಮ ವಿಚಾರಣೆಯನ್ನು ಕೈಗೊಳ್ಳಬಹುದು. ಅಂದಾಗೆ ಆ ಎಸ್ಟೇಟಿನ ಹೆಸರು "ಕಮಲಾಪುರ ಎಸ್ಟೇಟ್!!" ಎಂದು ಮಂಗಳೂರಿನ ಪ್ರಭಾಕರ್ ಶೆಟ್ಟಿಯು ಹೇಳುತ್ತಿದ್ದಂತೆ ಹಿಮವಂತನ ದೃಷ್ಟಿಯು ಅವನೆದುರಿಗಿದ್ದ ಫ್ಯಾಮಿಲಿ ಫೋಟೋ ದತ್ತ ಹೊರಳಿತು. ಆ ಕಲರ್ ಫೋಟೊವು ಬಣ್ಣ ಬಣ್ಣದ ರಹಸ್ಯಗಳನ್ನೊತ್ತು ಕುಳಿತಿತ್ತು!!”