“Book Descriptions: ಸ್ವಾತಂತ್ರ್ಯದ ಕೊನೆಯ ಹೋರಾಟವೆಂದು ಖ್ಯಾತಿ ಪಡೆದ 1942ರ ಅಗಸ್ಟ್ ಆಂದೋಲನವೇ 'ಮಾಡಿ ಮಡಿದವರು' ಕಾದಂಬರಿಯ ಕಥಾ ವಸ್ತುವಾಗಿದೆ. 1942ರಲ್ಲಿ ಸುಸಂಘಟಿತವಾದ ರೀತಿಯಲ್ಲಿ ಚಳುವಳಿ ನಡೆದುದೆಂದರೆ ಕೇವಲ ಬೆಳಗಾವಿ ಜಿಲ್ಲೆಯಲ್ಲಿ. ಆ ಕಾಲಕ್ಕೆ ಅಲ್ಲಿ ನಿಜವಾಗಿಯೂ ನಡೆದ ಹಲವು ಘಟನೆಗಳನ್ನು ಈ ಕಾದಂಬರಿಯಲ್ಲಿ ಬಳಸಿಕೊಳ್ಳಲಾಗಿದೆ. ಆ ಆಂದೋಲನದಲ್ಲಿ ಪ್ರತ್ಯಕ್ಷವಾಗಿ ಭಾಗವಹಿಸುವ ಸುಯೋಗವೂ ನನಗೆ ಲಭಿಸಿತ್ತಾದ್ದರಿಂದ ಅಂದಿನ ವಾತಾವರಣವನ್ನು ವಾಸ್ತವಿಕವಾಗಿ ಚಿತ್ರಿಸುವುದು ಸುಲಭವಾಗಿದೆ. ~ ಬಸವರಾಜ ಕಟ್ಟೀಮನಿ (ಕಾದಂಬರಿ, ಸಾಧನಕೇರಿ, ಧಾರವಾಡ, 1-6-1967)” DRIVE