ರಾಜ್ ಲೀಲಾ ವಿನೋದ [Raj Leela Vinoda]



Note: If you encounter any issues while opening the Download PDF button, please utilize the online read button to access the complete book page.
Size | 25 MB (25,084 KB) |
---|---|
Format | |
Downloaded | 640 times |
Status | Available |
Last checked | 12 Hour ago! |
Author | Ravi Belagere |
“Book Descriptions: ರೈಲಿನಲ್ಲಿ ಇಬ್ಬರ ಪ್ರಯಾಣ ಅದು 'ಸಂತ ತುಕಾರಾಂ' ಶೂಟಿಂಗ್ ಸಮಯ. ಅದಕ್ಕೆ ಹೋಗಿದ್ದು ನಾವಿಬ್ರೇ. ರೈಲಿನಲ್ಲಿ ಪ್ರಯಾಣ. ನಾನು ತಿಂಡಿ-ಗಿಂಡಿ ಏನೂ ತಗೊಂಡು ಹೋಗಿರ್ಲಿಲ್ಲ. ಅವರ ಮನೇಲಿ ಬೇಕಾಧಂಗೆ ತಿಂಡಿ ಪ್ಯಾಕ್ ಮಾಡಿ ಕಳ್ಸಿದ್ರು. ರೈಲಿನಲ್ಲಿ ತಿಂದ್ವಿ.[ಲೀಲಾವತಿ ಆತ್ಮಕಥನ 'ರಾಜ್ ಲೀಲಾ ವಿನೋದ'ದಲ್ಲಿ ಅಂಥಾದ್ದೇನಿದೆ?]
ಕಥೆ ಶುರುವಾಗಿದ್ದು ಇಲ್ಲಿಂದ... ''ನೋಡಿದ್ಯಾ, ಎಷ್ಟು ರುಚಿಯಾಗಿ ಮಾಡಿ ಕಳ್ಸಿದಾರೆ'' ಅಂದ್ರು. ಅದು ನಿಜಕ್ಕೂ ರುಚಿಯಾಗಿತ್ತು. ಚೆನ್ನಾಗಿ ತಿಂದ್ವಿ. ಆ ಹೊತ್ತಿಗೆ ನಾವು ಕೊಲ್ಹಾಪುರ ಸೇರಿಕೊಂಡ್ವಿ. ಅಲ್ಲಿ ಶುರುವಾಯ್ತು ನಮ್ಮ ಕಥೆ.
ಒಂದೇ ರೂಮ್ ನಲ್ಲಿ ವಾಸ ನನಗೂ-ಅವರಿಗೂ ಸ್ನೇಹವಿದೆ ಅಂತ ಅವರಿಗೆ ಗೊತ್ತು. ಹಾಗಾಗಿ ಇಬ್ರಿಗೂ ಸೇರಿಸಿ ಒಂದೇ ರೂಂ ಕೊಟ್ರು. ಮಹಾರಾಜರ ಪ್ಯಾಲೇಸ್ ಅದು.
ಲಕ್ಷ್ಮಿ ಕಾಸು ''ನೋಡಿದೇನೇ...ಮಹಾರಾಜರು ಬಾಳಿ ಬದುಕಿದ ಜಾಗ. ಅದು ನಮಗೆ ಸಿಕ್ಕಿದೆ'' ಅಂದ್ರು. ಆಮೇಲೆ ಅವರೇನೇ ಹೊರಗಡೆ ಹೋಗಿ ಒಂದು ಲಕ್ಷ್ಮಿ ಕಾಸು ತಗೊಂಡು. ಅದನ್ನ ಎಲ್ಲಿ ತಗೊಂಡ್ರು ಅಂತ ಗೊತ್ತಿಲ್ಲ.
ಮದುವೆಯ ಸಂಕೇತ ಅಲ್ವಾ? ಅದು ಲಕ್ಷ್ಮಿಯದು ಒಂದು ಬಿಳ್ಳೆ. ಲಕ್ಷ್ಮಿ ಚಿತ್ರ ಇದೆ. ಅದನ್ನ ಒಂದು ದಾರಕ್ಕೆ ಪೋಣಿಸಿ, ಕೊಲ್ಹಾಪುರದ ಲಕ್ಷ್ಮಿ ದೇವರ ಮುಂದೆ ನನ್ನ ಕೊರಳಿಗೆ ಕಟ್ಟಿದರು. ಅದು ಮದುವೆಯ ಸಂಕೇತವೇ ಅಲ್ವಾ?
ಮುದ್ದು ಮಾಡೋರು ಅವರಿಗೆ ಮೀನು ಅಂದ್ರೆ ತುಂಬ ಇಷ್ಟ: ತರಿಸೋರು. ನಾನು ಮೀನು ಹೆಚ್ಚೋದನ್ನೇ ನೋಡ್ತಾ ನಿಲ್ಲೋರು. ''ಜುಟ್ಟು ಎಗರಿಸಿಕೊಂಡು ಚೆನ್ನಾಗಿ ಹೆಚ್ತೀಯ ಕಣೆ..'' ಅಂತ ಅಲ್ಲೇ ಮುದ್ದು ಮಾಡೋರು. ಅದು ನಮ್ಮ ಪಾಲಿಗೆ ಒಂಥರಾ ಮಧುಚಂದ್ರ ಅನ್ನೋ ಹಾಗಿತ್ತು. Enjoy ಮಾಡಿದ್ವಿ.
ಕಲ್ಮಶ ಬೆರಕೆ ಆಯ್ತು ಅವರ ಪ್ರೀತಿಯಲ್ಲಿ ಕಲ್ಮಶ ಇರಲಿಲ್ಲ. ಕೆಲವು ಸಲ ಕಲ್ಪನೇಲಿ ಕವಿಗಳ ಥರಾ ಮಾತಾಡ್ತಿದ್ರು. ಯಾರೂ ಕೂಡ ಹುಟ್ಟೋವಾಗ್ಲೇ ಕಲ್ಮಶ ಇಟ್ಕೊಂಡು ಹುಟ್ಟೋದಿಲ್ಲ. ಬೆಳೀತಾ ಬೆಳೀತಾ ಅದು ಸೇರ್ಕೊಳ್ಳುತ್ತೆ. ಹಾಗೆ ಬೆರಕೆ ಆಯ್ತು ಅವರಲ್ಲಿ ಕಲ್ಮಶ.
ಬದುಕಿನ ಅತ್ಯಂತ ಸಂತೋಷದ ಕಾಲ 'ಸಂತ ತುಕಾರಾಂ' ಶೂಟಿಂಗ್ ಟೈಮ್ ಅನ್ನೋದು ನನ್ನ ಬದುಕಿನ ಅತ್ಯಂತ ಸಂತೋಷದ ಕಾಲ. ಇಬ್ರೂ ಒಟ್ಟಿಗೆ ಇದ್ವಿ. ಅದೊಂಥರಾ ಸಂತೋಷದ ಸಂಸಾರ. ಒಂದು ಪತ್ರದಲ್ಲಿ ದೊಡ್ಡೋರು ಅದನ್ನ ಬರ್ದಿದಾರೆ. ''ಕೊಲ್ಹಾಪುರದಲ್ಲಿ ನೀನು ಮಾಡಿದ ಮೀನಿನ ಘಮ ಇನ್ನೂ ಹಾಗೇ ಇದೆ. ಮೊನ್ನೆ ಕೊಲ್ಹಾಪುರಕ್ಕೆ ಮತ್ತೆ ಹೋದೆ. ಅದೇ ಜಾಗಕ್ಕೆ ಹೋದೆ. ತುಂಬ ಸಂಕಟ ಆಯ್ತು ಕಣೇ'' ಅಂತ ಬರೆದಿದ್ದಾರೆ. ('ರಾಜ್ ಲೀಲಾ ವಿನೋದ' ಪುಸ್ತಕದಲ್ಲಿ ಇರುವ ಯಥಾವತ್ ಸಾಲುಗಳಿವು)”