ತತ್ರಾಣಿ | Tatraani



Note: If you encounter any issues while opening the Download PDF button, please utilize the online read button to access the complete book page.
Size | 28 MB (28,087 KB) |
---|---|
Format | |
Downloaded | 682 times |
Status | Available |
Last checked | 15 Hour ago! |
Author | ದೀಪಾ ಜೋಶಿ | Deepa Joshi |
“Book Descriptions: ‘ತತ್ರಣಿ’ ದೀಪಾ ಜೋಶಿ ಅವರು ಬರೆದಿರುವ ಗತ ಶತಮಾನದ ಉತ್ಕ್ರಾಂತಿ ಕಥನವುಳ್ಳ ಕಾದಂಬರಿಯಾಗಿದೆ. ಕಳೆದ ಶತಮಾನದ ಪೂರ್ವಾರ್ಧದಲ್ಲಿ ಆರಂಭವಾಗಿ, ಉತ್ತರಾರ್ಧದಲ್ಲಿ ಕೊನೆಗೊಳ್ಳುವ ನಡುವಿನ ಸುಮಾರು ಐವತ್ತು ವರ್ಷಗಳ ಕಥಾ ಜಗತ್ತು ದೀಪಾ ಜೋಶಿಯವರು ಈ ಕಾದಂಬರಿಯಲ್ಲಿ ಅನಾವರಣಗೊಳ್ಳುತ್ತದೆ. ಉತ್ತರ ಕರ್ನಾಟಕದ ರಾಣೆಬೆನ್ನೂರು ಕೇಂದ್ರವಾಗುಳ್ಳ ಮಾಧ್ವ ವೈದಿಕ ಕುಟುಂಬವೊಂದರ ಬದುಕಿನ ಹೋರಾಟದ ಕಥೆ ಇಲ್ಲಿದೆ.
ಹುಚ್ಚಾಚಾರ್‍ರ ಸಾವಿನ್ನ ಸನ್ನಿವೇಶದಿಂದ ಆರಂಭವಾಗುವ ಈ ಕಥಾನಕವು, ಅವರ ಮಗ ಭುಜಂಗಾಚಾರ್‍ರು ಬದುಕಿನ ಏಳುಬೀಳುಗಳ ಹೋರಾಟದಲ್ಲಿ ಸುದೀರ್ಘ ಬಾಳ ಯಾತ್ರೆಗಳಲ್ಲಿ, ತೀವ್ರ ಬಡತನ, ಸಾವು, ದುಃಖ, ಒದ್ದಾಟಗಳನ್ನು ಎದುರಿಸುತ್ತಾ, ಆ ಕುಲುಮೆಯಲ್ಲಿ ಬೆಂದು ಮಾಗುತ್ತಾ, ಎಂದೂ ಸಹನೆಯನ್ನು ಕಳೆದುಕೊಳ್ಳದೆ ಘನತೆಯಿಂದ ಬಾಳುತ್ತಲೇ ಸ್ಥಿತಪ್ರಜ್ಞ ಸ್ಥಿತಿಗೆ ತಲುಪುವ ಹಂತದಲ್ಲಿ ಅಂತ್ಯವಾಗುತ್ತದೆ.
ಕಳೆದು ಹೋದ ಕಾಲಘಟ್ಟವೊಂದನ್ನು ಪುನರ್ ಸೃಷ್ಟಿಸುವ ಕಾರ್ಯದಲ್ಲಿ ದೀಪಾ ಜೋಶೀಯವರು ತೋರಿದ ಸಂಯಮ, ಆ ಕಾಲದ ಶಾಸ್ತ್ರಗಳು ರೀತಿಮ ರಿವಾಜುಗಳು, ಸಾಮಾಜಿಕ ಸ್ಥಿತಿಗತಿಗಳು. ಮೊದಲಾದ ಪ್ರತಿಯೊಂದನ್ನು ಸೂಕ್ಷ್ಮವಾಗಿ ಗಮನಿಸಿ, ಉತ್ತರ ಕರ್ನಾಟಕದ ಜವಾರಿ ಭಾಷೆಯಲ್ಲಿ ದಾಖಲಿಸಿದ ರೀತಿ ಅಪರೂಪದ್ದು”