“Book Descriptions: ಇದು ಸುಪ್ರಸಿದ್ಧ ಮೌರ್ಯವಂಶದ ರಾಜ ಅಶೋಕನ ಕುರಿತ ಐತಿಹಾಸಿಕ ಕಾದಂಬರಿ. ಕಥಾನಕದ ಸಂದರ್ಭ ಕಲಿಂಗಯುದ್ಧ. ಕಥಾವಸ್ತು ರೂಪಿತವಾಗಿರುವುದು ಅಶೋಕನೇ ಬರೆಸಿದ ಶಾಸನಗಳನ್ನಾಧರಿಸಿ. ಪ್ರಚಲಿತವಿರುವ ಬೌದ್ಧಗ್ರಂಥಗಳ ಕಥೆಗಳನ್ನಲ್ಲ. ಹಾಗಾಗಿ ನೀವಿಲ್ಲಿ ಬೇರೆಯೇ ಅಶೋಕನನ್ನು ಕಾಣುವಿರಿ. ಇದಕ್ಕಾಗಿ ಸುದೀರ್ಘ ಅಧ್ಯಯನ, ಕ್ಷೇತ್ರಕಾರ್ಯಗಳನ್ನು ಕೈಗೊಂಡಿರುವ ಲೇಖಕಿ ಅಶೋಕ ತನ್ನ ಶಾಸನದಲ್ಲಿ ಉಲ್ಲೇಖಿಸಿರುವ ಬ್ರಾಹ್ಮಣ-ಶ್ರಮಣ-ಆಜೀವಕ-ನಿರ್ಗ್ರಂಥ ಎಂಬ ನಾಲ್ಕು ನೆಲೆಗಳಲ್ಲಿ ಇತಿವೃತ್ತವನ್ನು ಸೃಜಿಸಿದ್ದಾರೆ. ಕ್ರಿ.ಪೂ. ಮೂರನೆಯ ಶತಮಾನದ ಪ್ರಾಚೀನ ಭಾರತವನ್ನು ಪುನರ್ನಿರ್ಮಿಸಿದ್ದಾರೆ. ಈ ರಸವತ್ತಾದ ಕಾದಂಬರಿಗೆ ಶತಾವಧಾನಿ ಡಾ| ಆರ್. ಗಣೇಶರ ಅರ್ಥಪೂರ್ಣ ಮುನ್ನುಡಿಯಿದೆ.” DRIVE