ಅಂಟಿದ ನಂಟಿನ ಕೊನೆ ಬಲ್ಲವರಾರು | Antida Nantina Kone Ballavararu
(By N Sandhyarani)


Size | 20 MB (20,079 KB) |
---|---|
Format | |
Downloaded | 570 times |
Last checked | 7 Hour ago! |
Author | N Sandhyarani |
ಸಂಬಂಧಗಳೇ ಹಾಗೆ. ಅವು ವ್ಯಾಖ್ಯಾನಕ್ಕೆ ಸಿಗುವುದಿಲ್ಲ, ಚೌಕಟ್ಟು ಹಾಕುತ್ತಿರುವ ಕ್ಷಣದಲ್ಲೇ ನದಿಯ ಹಾಗೆ ಅದನ್ನು ಅತಿಕ್ರಮಿಸುತ್ತಲಿರುತ್ತವೆ. ಒಟ್ಟಾಗಿ ಇರುವಂತೆ ಕಂಡಾಗಲೂ, ನಡುವೆ ಅಗೋಚರ ಅಂತರ ಇರುತ್ತದೆ. ಪ್ರೇಮ ನಿನ್ನ ತಲೆಯ ಮೇಲೆ ಕಿರೀಟವನ್ನಿಡುತ್ತಿರುವ ಕ್ಷಣದಲ್ಲೇ ಅದು ನಿನ್ನ ಹೆಗಲ ಮೇಲೆ ಶಿಲುಬೆಯೊಂದನ್ನು ಇರಿಸುತ್ತಿರುತ್ತದೆ… ಆಗಸಕ್ಕೆ ಚಾಚಿ, ಸೂರ್ಯನ ಎಳೆಬಿಸಿಲಿಗೆ ಕಂಪಿಸುವ ಮೃದುವಾದ ಎಲೆಗಳನ್ನು ನೇವರಿಸುವ ಹೊತ್ತಿನಲ್ಲೇ, ನಿನ್ನಲ್ಲಿ ಆಳವಾಗಿ ಇಳಿದ ಬೇರುಗಳನ್ನು ಅಲುಗಾಡಿಸುತ್ತಿರುತ್ತದೆ ಎಂದು ಅದೇ ಗಿಬ್ರಾನ್ ಹೇಳುತ್ತಾನೆ.
ಇಲ್ಲಿರುವುದು ಸಂಬಂಧಗಳ ನೆಲೆಗಳನ್ನು ಶೋಧಿಸುವ ಕಥೆಗಳು. ಅವು ಇಲ್ಲಿ ಮೂರು ಮಜಲುಗಳಲ್ಲಿ ಕಾಣಸಿಗುತ್ತವೆ. ಮೊದಲನೆಯದು ಗಂಡು-ಹೆಣ್ಣಿನ ನಡುವಿನ ಸಂಬಂಧ, ನಂತರದ್ದು ವ್ಯಕ್ತಿ ಇನ್ನೊಬ್ಬ ವ್ಯಕ್ತಿಯೊಡನೆ, ಸಮಾಜದೊಡನೆ ಹೊಂದಿರುವ ಸಂಬಂಧ ಮತ್ತು ಮೂರನೆಯದ್ದು ವ್ಯಕ್ತಿ ತನ್ನೊಂದಿಗೆ ಹೊಂದಿರುವ ಸಂಬಂಧ. ಮೊದಲ ಎರಡು ಬಹಿರ್ಮುಖಿ ಚಲನೆಗಳಾದರೆ, ಕಡೆಯದು ಅಂತರ್ಮುಖಿ ಚಲನೆ. ಈ ಚಲನೆಯಲ್ಲಿ ಜೀವಗಳು ಕಂಡುಕೊಳ್ಳುವ ಸುಖ, ದುಃಖ, ಸಂತೋಷ, ಸವಾಲು, ಪ್ರೇಮ, ಕಾಮ, ಹತಾಶೆ, ಭರವಸೆ, ಪ್ರಶ್ನೆ ಮತ್ತು ಉತ್ತರಗಳು ಈ ಕಥೆಗಳ ಎಳೆಗಳಲ್ಲಿವೆ.
ಸಂಬಂಧಗಳ ಅಗ್ನಿದಿವ್ಯ ನಮ್ಮನ್ನು ಹೆಚ್ಚು ಮಾನವೀಯಗೊಳಿಸುತ್ತದೆ.”