ಕಲ್ಲು ಕರಗುವ ಸಮಯ | Kallu Karaguva Samaya



Note: If you encounter any issues while opening the Download PDF button, please utilize the online read button to access the complete book page.
Size | 21 MB (21,080 KB) |
---|---|
Format | |
Downloaded | 584 times |
Status | Available |
Last checked | 8 Hour ago! |
Author | P. Lankesh |
“Book Descriptions: ’ಸಾಹಿತ್ಯ ಕೊನೆಗೂ ಸಾಹಿತಿಗಳಿಂದ ನಿರೀಕ್ಷಿಸುವುದು ನ್ಯಾಯವಂತಿಕೆ, ನಿಷ್ಠುರತೆಯನ್ನು; ಅದು ಇದ್ದಾಗ ನಿರೂಪಣೆ, ವರ್ಣನೆ ಇತ್ಯಾದಿಗಳು ತಾವಾಗಿಯೇ ಬರುತ್ತವೆ. ನಿಷ್ಠುರತೆಯ ಸೂತ್ರದಲ್ಲಿಯೇ ಪ್ರೀತಿ, ಮಾನವೀಯತೆ ಎಲ್ಲವೂ ಇವೆ; ಪ್ರೀತಿ, ಮಾನವೀಯತೆಯ ನಿರರ್ಥಕತೆ ಕೂಡ’ ಎಂದು ನೇರ ಬಾಣ ಹೂಡುವ ಸಾಹಿತಿ ಪತ್ರಕರ್ತ ಪಿ. ಲಂಕೇಶರ ಕಥಾ ಸಂಕಲನ ’ಕಲ್ಲು ಕರಗುವ ಸಮಯ’ ಕನ್ನಡದಲ್ಲಿ ಸದಾ ನಳನಳಿಸುತ್ತಲೇ ಇರುವ ಹೂವು.
ಲಂಕೇಶ್ ಕೇವಲ ವ್ಯಕ್ತಿಯಲ್ಲ ಅದೊಂದು ವಿದ್ಯಮಾನ ಎನ್ನುವವರಿದ್ದಾರೆ. ಸಾಹಿತ್ಯ, ಪತ್ರಿಕೋದ್ಯಮ, ಸಿನಿಮಾ, ರಾಜಕಾರಣ ಹೀಗೆ ಎಲ್ಲೆಲ್ಲೂ ಸಂದ ದೈತ್ಯ ಪ್ರತಿಭೆ. ಅವರು ’ಕಲ್ಲು ಕರಗುವ ಸಮಯ’ವನ್ನು ಪಡಿಮೂಡಿಸಿರುವ ರೀತಿ ಅನನ್ಯವಾದುದು. ಓದಿಯೇ ಸವಿಯಬೇಕಾದಂತಹ, ಆ ಕತೆಗಳ ಬಗ್ಗೆ ಬೇರೆಯವರು ಏನು ಬರೆದರೂ ಮಿತಿಯೇ ಎನ್ನಬಹುದಾದ ವಿಶಿಷ್ಟ ಕೃತಿ ಇದು.”