“Book Descriptions: ಕಾಶ್ಮೀರದ ಎತ್ತರದ ಮಂಜುಪ್ರದೇಶದಲ್ಲಿ, ಅಲೆಕ್ಸಾಂಡರ್‌ನ ಸೈನ್ಯದ ಜೊತೆ ಬಂದ ಗ್ರೀಕ್ ದೇಶದವರೆನ್ನಲಾದ ಒಂದು ಜನಾಂಗದ ಜಾನಪದ ಪದ್ಧತಿಗಳ ಅಧ್ಯಯನದಲ್ಲಿ ತೊಡಗಿದ್ದ, ಯುವ ಸಂಶೋಧಕಿ ಭಾವನಾಳನ್ನು ಭಾರತದ ಸೈನ್ಯವು ಹಠಾತ್ತನೆ ವಿಮಾನದಲ್ಲಿ ಸೆರೆಹಿಡಿದು ಹೊತ್ತೊಯ್ಯುತ್ತದೆ. ಅದೇ ವೇಳೆಗೆ, ಅಕಸ್ಮಾತ್ ಆಗಿ ದೊರಕಿದ, ಹಂಪಿಯ ನಾಡು ಜನರ, ಜಾನಪದ ನಂಬಿಕೆಯೊಂದರ ಬೆನ್ನುಹತ್ತಿ ತಿರುಪತಿಯ ಬೆಟ್ಟಗಳಲ್ಲಿ ರಹಸ್ಯವೊಂದನ್ನು ಅರಸಿ ಹೊರಟಿದ್ದ ಪೂಜಾಳನ್ನು ಸಿ.ಬಿ.ಐ. ಬಂಧಿಸಿ ಕರೆದೊಯ್ಯತ್ತದೆ. ತಾವು ಈ ಸೆರೆಯಿಂದ ಮುಕ್ತಿ ಹೊಂದುವ ಪ್ರಯತ್ನದಲ್ಲಿ ಇಬ್ಬರೂ ಕಂಡುಕೊಳ್ಳುವ ಚರಿತ್ರೆಯ ರಹಸ್ಯಗಳು, ವಿಜಯನಗರದ ಕಾಲದ ಧರ್ಮ, ರಾಜಕೀಯದ ಸುತ್ತ ಬೆಳೆದ ಅಗಾಧ ನಿಧಿಯ ಸತ್ಯದತ್ತ ಕರೆದೊಯ್ಯುತ್ತವೆ. ಆ ಸಿರಿಯ ಹುಡುಕಾಟವೇ 'ಕರಿಸಿರಿಯಾನ!'” DRIVE